ಕಾನ್ಪುರ : ಮೋಸ ಮಾಡಿ ಮದುವೆ ಮಾಡಿಸಿದ್ದಕ್ಕೆ ವ್ಯಕ್ತಿಯೊಬ್ಬ ತನ್ನ ಸ್ನೇಹಿತನನ್ನು ಕೊಲೆ ಮಾಡಿದ ಘಟನೆ ಉತ್ತರ ಪ್ರದೇಶದ ಕಾನ್ಪುರ್ ದೇಹತ್ ಜಿಲ್ಲೆಯ ಗಣೇಶ್ ಪುರ ಗ್ರಾಮದಲ್ಲಿ ನಡೆದಿದೆ. ಆರೋಪಿಗೆ ತನ್ನ ಮನೆಯವರು ಮದುವೆಯಾಗುವಂತೆ ಒತ್ತಾಯಿಸಿದ ಹಿನ್ನಲೆಯಲ್ಲಿ ಸ್ನೇಹಿತನ ಬಳಿ ಹುಡುಗಿ ಹುಡುಕಿಕೊಡುವಂತೆ ಕೇಳಿದ್ದಾನೆ. ಅದರಂತೆ ಸ್ನೇಹಿತ ಹುಡುಗಿಯನ್ನು ಹುಡುಕಿಕೊಟ್ಟಿದ್ದು, ಅವರಿಗೆ ಮದುವೆ ಮಾಡಲು ಸಾಧ್ಯವಾಗದ ಕಾರಣ ಆರೋಪಿಯೇ ಎಲ್ಲಾ ಖರ್ಚುಗಳನ್ನು ಮಾಡಿ ಮದುವೆಯಾಗಿದ್ದಾನೆ. ಆದರೆ ವಧು ಚಿನ್ನಾಭರಣಗಳ ಸಹಿತವಾಗಿ