ನವದೆಹಲಿ: ಮುಂದಿನ ವರ್ಷದಿಂದ ಆಯುರ್ವೇದ ವೈದ್ಯಕೀಯ ಕೋರ್ಸ್ ಗಳಿಗೂ ರಾಷ್ಟ್ರೀಯ ಅರ್ಹತಾ ಪರೀಕ್ಷೆ ನೀಟ್ ಕಡ್ಡಾಯವಾಗಲಿದೆ. ಆಯುಷ್ ಅಂದರೆ ಆಯುರ್ವೇದ, ಯುನಾನಿ, ಹೋಮಿಯೋಪತಿ, ಸಿದ್ಧ ಮತ್ತು ನ್ಯಾಚುರೋಪತಿ ಕೋರ್ಸ್ ಗಳ ಪ್ರವೇಶಾತಿಗೆ ನೀಟ್ ಕಡ್ಡಾಯವಾಗಿ ಬರೆಯಲೇಬೇಕು. ಈ ವರ್ಷ ಸಿಇಟಿ ಪರೀಕ್ಷೆ ಬರೆದರೆ ಸಾಕಿತ್ತು.ವಿಶ್ವದಾದ್ಯಂತ ಆಯುರ್ವೇದ ಪದ್ಧತಿಗೆ ಬೇಡಿಕೆ ಹೆಚ್ಚುತ್ತಿದೆ. ಈ ಹಿನ್ನಲೆಯಲ್ಲಿ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ನೀಟ್ ಜಾರಿಗೆ ತರಲಾಗುತ್ತಿದೆ ಎಂದು ಕೇಂದ್ರ ಆಯುಷ್ ಇಲಾಖೆ ರಾಜ್ಯ