ಜಾರ್ಖಂಡ್ : ಜಾರ್ಖಂಡ್ ರಾಜ್ಯದ ಪಾಕುರ್ ಜಿಲ್ಲೆಯ ಗ್ರಾಮವೊಂದರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಕೊಲೆಮಾಡಿದ ಘಟನೆಯೊಂದು ನಡೆದಿದೆ. ಸ್ಥಳೀಯ ಚುನಾವಣೆಯಲ್ಲಿ ಸ್ಪರ್ಧಿಸಿದ ಮಹಿಳೆಯೊಬ್ಬಳಿಗೆ ಕುಟುಂಬವೊಂದರ ಸದಸ್ಯರು ಮತ ಹಾಕಲಿಲ್ಲ ಎಂಬ ಕಾರಣಕ್ಕೆ ಆ ಕುಟುಂಬದ 13ವರ್ಷದ ಬಾಲಕಿಯ ಮೇಲೆ ಮಹಿಳೆಯ ಪತಿ ಸೇರಿದಂತೆ ನಾಲ್ಕು ಮಂದಿ ಅತ್ಯಾಚಾರವೆಸಗಿ ಕೊಲೆಮಾಡಿದ್ದಾರೆ. ಬಾಲಕಿ ಬರ್ಹಿದೆಸೆಗೆಂದು ಹೋದವಳು ಹಿಂತಿರುಗಿ ಬಾರದೆ ಇದ್ದಾಗ ಆಕೆಯ ತಂದೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಕೇಸು ದಾಖಲಿಸಿದ್ದರು,