ನವದೆಹಲಿ: ಹಿಂದೂಗಳ ಪವಿತ್ರ ನದಿ ಗಂಗೆ ತಾನು ಕಲುಷಿತಗೊಳ್ಳುತ್ತಿರುವುದಲ್ಲದೇ ಸಮುದ್ರವನ್ನು ಮಲಿನಗೊಳಿಸುತ್ತಿದೆ. ಹೀಗೆ ಸಮುದ್ರಗಳನ್ನುಕಲುಷಿತಗೊಳಿಸುತ್ತಿರುವ ನದಿಗಳಲ್ಲಿ ಭಾರತದ ಪವಿತ್ರ ಗಂಗಾ ನದಿ ವಿಶ್ವದಲ್ಲೇ 2ನೇ ಸ್ಥಾನ ಪಡೆದುಕೊಂಡಿದೆ ಎಂಬ ಅಪಖ್ಯಾತಿಗೆ ಒಳಗಾಗಿದೆ. ಪ್ರತೀ ವರ್ಷ ಗಂಗೆಯಲ್ಲಿ ಸುಮಾರು 115,000 ಟನ್ ಪ್ಲಾಸ್ಟಿಕ್ ಮ್ತತು ಕಲ್ಮಶ ಸೇರುತ್ತಿದೆ. ಅದೇ ಕಲ್ಮಶದೊಂದಿಗೆ ಸಮುದ್ರ ಸೇರಿ ಅದನ್ನೂ ಕೂಡ ಕಲುಷಿತಗೊಳಿಸುತ್ತಿದೆ ಎಂದು ಸಮುದ್ರ ಸ್ವಚ್ಛತಾ ಅಭಿಯಾನ ನಡೆಸುತ್ತಿರುವ ಡಚ್ ಮೂಲದ ಸಂಸ್ಥೆಯೊಂದು ಹೇಳಿದೆ.