ಬೆಂಗಳೂರು : ಚಿಕ್ಕಪ್ಪನ ಮೇಲಿನ ಹಳೆಯ ದ್ವೇಷಕ್ಕೆ 12 ವರ್ಷದ ಹುಡುಗನಿಗೆ ಗ್ಯಾಂಗ್ ಒಂದು ಥಳಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಚಿಕ್ಕಪ್ಪ ವ್ಯಕ್ತಿಯೊಬ್ಬರ ಮೇಲಿನ ದೂರನ್ನು ಹಿಂಪಡೆಯಲು ನಿರಾಕರಿಸಿದ್ದಾರೆ ಎಂಬ ಕಾರಣ ಅವನ ಸಹೋದರ ಮಗನನ್ನು ಗ್ಯಾಂಗ್ ವೊಂದು ಥಳಿಸಿದೆ. ಅಲ್ಲದೇ ಅವನಿಗೆ ಮದ್ಯಪಾನ ಮಾಡುವಂತೆ ಒತ್ತಾಯಿಸಿ ಹಿಂಸೆ ನೀಡಿದ್ದಾರೆ. ಆ ವೇಳೆ ಅಲ್ಲಿಗೆ ಬಂದ ಹುಡುಗನ ಕುಟುಂಬಸ್ಥರೊಬ್ಬರು ಆತನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.ಈ ಘಟನೆಯಲ್ಲಿ ಸಂತ್ರಸ್ತನಿಗೆ ಹಲವು ಗಾಯಗಳಾಗಿದ್ದು