ನವದೆಹಲಿ: ಮಾಜಿ ಕ್ರಿಕೆಟಿಗ, ಸಂಸದ ಗೌತಮ್ ಗಂಭೀರ್ ಗೆ ಮತ್ತೆ ಉಗ್ರ ಸಂಘಟನೆಯಿಂದ ಜೀವ ಬೆದರಿಕೆ ಈಮೇಲ್ ಬಂದಿದೆ. ಐಸಿಸ್ ಕಾಶ್ಮೀರ ಸಂಘಟನೆಯಿಂದ ಈ ಮೊದಲು ಅವರಿಗೆ ಈಮೇಲ್ ಮುಖೇನ ಬೆದರಿಕೆ ಕರೆ ಬಂದಿತ್ತು. ಈ ಸಂಬಂಧ ಅವರು ದೆಹಲಿ ಪೊಲೀಸರಿಗೆ ದೂರು ನೀಡಿದ್ದರು.ಪೊಲೀಸರಲ್ಲೇ ನಮಗೆ ಮಾಹಿತಿ ಕೊಡುವವರಿದ್ದಾರೆ. ನಿಮ್ಮ ದೂರಿನ ತನಿಖೆ ಯಾವ ಹಂತದಲ್ಲಿದೆ ಎನ್ನುವ ಎಲ್ಲಾ ಮಾಹಿತಿಗಳೂ ನಮಗೆ ಗೊತ್ತಾಗುತ್ತಿದೆ. ಯಾರಿಂದಲೂ ನಿಮ್ಮನ್ನು ಕಾಪಾಡಲು ಸಾಧ್ಯವಿಲ್ಲ