ನವದೆಹಲಿ ; ದೇಶದಲ್ಲಿ ಕೋವಿಡ್ ಪ್ರಕರಣಗಳು ಮತ್ತೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ವಿಮಾನ ಹಾಗೂ ವಿಮಾನ ನಿಲ್ದಾಣಗಳಲ್ಲಿ ಮಾಸ್ಕ್ ಧರಿಸದೇ ಅಥವಾ ಕೈಯನ್ನು ಸ್ಯಾನಿಟೈಸ್ ಮಾಡಿಕೊಳ್ಳದೇ,ಕೋವಿಡ್ ಮಾರ್ಗದರ್ಶಿಗಳ ಉಲ್ಲಂಘನೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ದೆಹಲಿ ಹೈಕೋರ್ಟ್ ಸೂಚಿಸಿದೆ.ಕೋವಿಡ್ ಮಾರ್ಗದರ್ಶಿಗಳನ್ನು ಉಲ್ಲಂಘಿಸುವವರ ಮೇಲೆ ದಂಡವನ್ನು ವಿಧಿಸಬೇಕು. ಅವರನ್ನು ನೋ-ಫ್ಲೈ ಲಿಸ್ಟ್ನಲ್ಲಿ (ಹಾರಾಟ ನಿರ್ಬಂಧ ಪಟ್ಟಿ) ಸೇರಿಸಬೇಕು. ವಿಮಾನ ನಿಲ್ದಾಣ ಅಥವಾ ವಿಮಾನದೊಳಗೆ ಪ್ರಯಾಣಿಕರು ಮಾಸ್್ಕ ಧರಿಸದೇ ಇದ್ದಲ್ಲಿ ಅವರನ್ನು ದೈಹಿಕವಾಗಿ