ಮುಂಬೈ : ಕೋವಿಡ್ ನಾನಾ ರೂಪಾಂತರಗಳೊಂದಿಗೆ ಜಾಗತಿಕವಾಗಿ ಆತಂಕ ಮೂಡಿಸಿದೆ. ಕೋವಿಡ್ ವಿರುದ್ಧದ ಹೋರಾಟಕ್ಕೆ ಲಸಿಕೆ ಪಡೆಯುವಂತೆ ಸಾಕಷ್ಟು ಅರಿವು ಮೂಡಿಸಿದರು ಎಷ್ಟೋ ಮಂದಿ ಈವರೆಗೂ ಲಸಿಕೆ ಹಾಕಿಸಿಕೊಂಡಿಲ್ಲ. ಇದರಿಂದ ಬೇಸತ್ತಿರುವ ಮಹಾರಾಷ್ಟ್ರದ ಹಿಂಗೋಲಿ ಪುರಸಭೆ ವಿನೂತನ ಕಾರ್ಯಕ್ರಮ ಜಾರಿಗೆ ಮುಂದಾಗಿದೆ. ಹಿಂಗೋಲಿ ಜಿಲ್ಲೆಯಲ್ಲಿ ಈವರೆಗೆ ಶೇ. 70 ರಷ್ಟು ಮಂದಿ ಕೋವಿಡ್ ಲಸಿಕೆಯ ಮೊದಲ ಡೋಸ್ ಪಡೆದಿದ್ದಾರೆ. ಈ ಪೈಕಿ ಶೇ. 56 ರಷ್ಟು ಮಂದಿ ಎರಡೂ ಡೋಸ್ಗಳನ್ನು