Widgets Magazine

ಘರ್ ಘರ್ ಮೋದಿ: ಪ್ರಧಾನಿ ಮೋದಿಯನ್ನು ನಿಮ್ಮ ಮನೆಗೆ ಕರೆಸಿಕೊಳ್ಳಬಹುದು ಗೊತ್ತಾ?

ನವದೆಹಲಿ| Rajesh patil| Last Updated: ಗುರುವಾರ, 15 ಸೆಪ್ಟಂಬರ್ 2016 (18:41 IST)
 ಒಂದು ವೇಳೆ, ಪ್ರಧಾನಮಂತ್ರಿ ನರೇಂದ್ರ ಮೋದಿಯನ್ನು ನಿಮ್ಮ ಮನೆಗೆ ಕರೆಸಿಕೊಳ್ಳಬೇಕು ಎನ್ನುವ ಬಯಕೆಯಿದೆಯೇ ಹಾಗಾದ್ರೆ ಆನ್‌ಲೈನ್ ಇ-ಕಾಮರ್ಸ್‌ ದೈತ್ಯ ಕಂಪೆನಿಗಳ ಬಳಿ ಇದೆ ನಿಮಗೆ ಪರಿಹಾರ. 
ಸ್ನಾಪ್‌ಡೀಲ್ ಮತ್ತು ಫ್ಲಿಪ್‌ಕಾರ್ಟ್ ಆನ್‌ಲೈನ್ ಕಂಪೆನಿಗಳು ಮೋದಿ ಅಭಿಮಾನಿಗಳು, ಬೆಂಬಲಿಗರಿಗಾಗಿ ನರೇಂದ್ರ ಭಾಯಿ ಮೋದಿ ಮೃದುವಾದ ಟಾಯ್‌‌‌ಗಳನ್ನು ಮಾರಾಟ ಮಾಡುತ್ತಿದೆ.
 
40 ಸೆಂಟಿಮೀಟರ್ ಎತ್ತರವಿರುವ ಟಾಯ್‌, ಮೋದಿಯಂತೆ ಆರೆಂಜ್ ಕುರ್ತಾ ಮತ್ತು ಶ್ವೇತ ಬಣ್ಣದ ಪೈಜಾಮಾ ಧರಿಸಿರುವುದು ಕಂಡುಬಂದಿದೆ. ಟಿಕ್‌ಲೆಸ್ ಎನ್ನುವ ಸಾಫ್ಟ್ ಟಾಯ್ ಕಂಪೆನಿ ಮಾರಾಟ ಮಾಡುತ್ತಿದೆ. 
 
ಮೋದಿ ಟಾಯ್ ಸ್ನಾಪ್‌ಡೀಲ್‌ನಲ್ಲಿ 1365 ರೂಪಾಯಿಗಳಿಗೆ ಮಾರಾಟವಾಗುತ್ತಿದ್ದರೆ, ಫ್ಲಿಪ್‌ಕಾರ್ಟ್‌ನಲ್ಲಿ 958 ರೂಪಾಯಿಗಳಿಗೆ ಲಭ್ಯವಿದೆ. ಮೋದಿ ಟಾಯ್ ಮನೆಯಲ್ಲಿಡುವುದರಿಂದ ಮಕ್ಕಳು ಎಂಜಾಯ್ ಮಾಡಬಹುದಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ ಇದರಲ್ಲಿ ಇನ್ನಷ್ಟು ಓದಿ :