ಲಕ್ನೋ: ನೆರೆಮನೆಯವನ ಕಾಟ ತಾಳಲಾಗದೇ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಶರಣಾದ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದಿದೆ. ಆರನೇ ತರಗತಿಯಲ್ಲಿ ಓದುತ್ತಿದ್ದ 14 ವರ್ಷದ ಅಪ್ರಾಪ್ತೆ ಆತ್ಮಹತ್ಯೆಗೆ ಶರಣಾದವಳು. ಕಳೆದ ಆರು ತಿಂಗಳಿನಿಂದ ನೆರೆಮನೆಯ ಯುವಕ ಈಕೆಯನ್ನು ಹಿಂಬಾಲಿಸಿ ಕಾಟ ಕೊಡುತ್ತಿದ್ದ ಎನ್ನಲಾಗಿದೆ.ಈ ಸಂಬಂಧ ಇದೀಗ ಯುವಕನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದಾರೆ. ಆದರೆ ಬಾಲಕಿಯ ಮನೆಯವರು ಇನ್ನೂ ಈ ಬಗ್ಗೆ ದೂರು ನೀಡಿಲ್ಲ ಎನ್ನಲಾಗಿದೆ.