ಪಾಟ್ನಾ : ಮಾನಭಂಗಕ್ಕೊಳಗಾದ 16 ವರ್ಷದ ಹುಡುಗಿಯೊಬ್ಬಳು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಿಹಾರದಲ್ಲಿ ನಡೆದಿದೆ. ಹುಡುಗಿ ಅದೇ ಗ್ರಾಮದ ನಾಲ್ವರು ಮಾನಭಂಗ ಎಸಗಿದ್ದಾರೆ. ಇದರಿಂದ ಮನನೊಂದಿದ್ದ ಹುಡುಗಿ ತನ್ನ ಕೋಣೆಯಲ್ಲಿ ಲಾಕ್ ಮಾಡಿಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.ಈ ಬಗ್ಗೆ ಈಗಾಗಲೇ ಅತ್ಯಾಚಾರದ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಹಾಗೇ ಹುಡುಗಿಯ ಆತ್ಮಹತ್ಯೆ ಪ್ರಕರಣದ ಬಗ್ಗೆ ತನಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.