ರಾಯ್ ಪುರ|
pavithra|
Last Modified ಶನಿವಾರ, 28 ನವೆಂಬರ್ 2020 (09:28 IST)
ರಾಯ್ ಪುರ : ಮನೆಗೆ ತಡವಾಗಿ ಮರಳಿದ 14 ವರ್ಷದ ಹುಡುಗಿಗೆ ಹೆತ್ತವರು ಗದರಿದಕ್ಕೆ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಸುಳ್ಳು ಹೇಳಿದ ಘಟನೆ ಛತ್ತೀಸ್ ಗಢದ ಕಾವರ್ಧಾ ಜಿಲ್ಲೆಯಲ್ಲಿ ನಡೆದಿದೆ.
ಹುಡುಗಿ ತನ್ನ ಗೆಳೆಯನನ್ನು ಭೇಟಿ ಮಾಡಲು ಹೊರಗೆ ಹೋಗಿದ್ದಾಳೆ. ಆದರೆ ಆಕೆ ಮನೆಗೆ ಬರದ ಕಾರಣ ಮನೆಯವರು ಪೊಲೀಸರಿಗೆ ದೂರು ನೀಡಿದ್ದಾರೆ. ತಡರಾತ್ರಿ ಹುಡುಗಿ ಮನೆಗೆ ಬಂದಾಗ ಮನೆಯವರ ಬೈಗುಳದಿಂದ ತಪ್ಪಿಸಿಕೊಳ್ಳಲು ತನ್ನ ಮೇಲೆ ಸುಳ್ಳು ಲೈಂಗಿಕ ದೌರ್ಜನ್ಯದ ಕಥೆ ಕಟ್ಟಿದ್ದಾಳೆ. ತನ್ನ ಸ್ನೇಹಿತನೊಂದಿಗೆ ಇದ್ದಾಗ 6 ಮಂದಿ ಪುರುಷರು ಮಾನಭಂಗ ಎಸಗಿದ್ದಾರೆ ಎಂದು ಆರೋಪಿಸಿದ್ದಾಳೆ.
ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಯಾವುದೇ ಸುಳಿಯು ಸಿಗಲಿಲ್ಲ. ಕೊನೆಗೆ ಪೊಲೀಸರು ಹುಡುಗಿಯ ಮೇಲೆ ಅನುಮಾನಗೊಂಡು ಇಬ್ಬರನ್ನು ವಿಚಾರಣೆ ನಡೆಸಿದಾಗ ಹುಡುಗಿ ಹುಡುಗನ ಜೊತೆ ಲೈಂಗಿಕ ಸಂಬಂಧ ಹೊಂದಿರುವುದು ತಿಳಿದುಬಂದಿದೆ. ಈ ಹಿನ್ನಲೆಯಲ್ಲಿ ಹುಡುಗನನ್ನು ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ.