ಪಣಜಿ: ಗೋವಾ ಸಿಎಂ ಮನೋಹರ್ ಪರಿಕ್ಕರ್ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪ್ಯಾಂಕ್ರಿಯಾಟೈಟಿಸ್ ಖಾಯಿಲೆಯಿಂದ ಬಳಲುತ್ತಿದ್ದ ಪರಿಕ್ಕರ್ ಕಳೆದ ವಾರವಷ್ಟೇ ಆಸ್ಪತ್ರೆಗೆ ದಾಖಲಾಗಿ ನಂತರ ಬಿಡುಗಡೆಯಾಗಿದ್ದರು. ಆಸ್ಪತ್ರೆಯಿಂದ ನೇರವಾಗಿ ಗೋವಾ ವಿಧಾನ ಸಭೆಗೆ ಆಗಮಿಸಿದ ಸಿಎಂ ಪರಿಕ್ಕರ್ ಬಜೆಟ್ ಭಾಷಣ ಮಾಡಿದ್ದರು. ಇದೀಗ ಮತ್ತೆ ನಿರ್ಜಲೀಕರಣ, ಕಡಿಮೆ ರಕ್ತದೊತ್ತಡ ಹಿನ್ನಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.ಕುಟುಂಬ ಸದಸ್ಯರ ಜತೆಗೆ ಆಸ್ಪತ್ರೆಗೆ ಬಂದ ಪರಿಕ್ಕರ್ ಗೆ ನಡೆಯಲೂ ಆಗದಷ್ಟು ಸುಸ್ತು ಇತ್ತು. ವೀಲ್