ಗೋವಾ ಆರ್ಎಸ್ಸೆಸ್ ಮುಖ್ಯಸ್ಥರಾಗಿದ್ದ ಸುಭಾಶ್ ವೆಲಿಂಗ್ಕರ್ ಅವರನ್ನು ಯಾವುದೇ ಸೌಜನ್ಯತೋರಿಸದೇ ವಜಾ ಮಾಡಿದ ಕ್ರಮದ ಬಗ್ಗೆ ಗೋವಾ ಮುಖ್ಯಮಂತ್ರಿ ಲಕ್ಷ್ಮಿಕಾಂತ್ ಪಾರ್ಸೆಕರ್ ವಿಷಾದ ಸೂಚಿಸಿದ್ದಾರೆ. ಇದಕ್ಕೆ ಮುಂಚೆ ಆರ್ಎಸ್ಸೆಸ್ ಪ್ರಚಾರ ಮುಖ್ಯಸ್ಥ ಮನಮೋಹನ್ ವೈದ್ಯ ನವದೆಹಲಿಯಲ್ಲಿ ವೆಲಿಂಗ್ಕರ್ ಅವರನ್ನು ಗೋವಾದ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ವಿರೋಧಿಯಾಗಿ ಕೆಲಸ ಮಾಡಿದ್ದಕ್ಕಾಗಿ ವಜಾ ಮಾಡಲಾಗಿದೆ ಎಂದು ತಿಳಿಸಿದರು. ಗೋವಾ ಸರ್ಕಾರದ ವಿರುದ್ಧ ಕಾರ್ಯನಿರ್ವಹಿಸಿ ರಾಜಕೀಯ ಸಂಘಟನೆ ರೂಪಿಸಿದ ಕಾರಣಕ್ಕಾಗಿ ವೆಲಿಂಗ್ಕರ್