ಗೋವಾ : ಗೋವಾದ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು ಈ ವರ್ಷದ ಅಕ್ಟೋಬರ್ ನಿಂದ ಗೋವಾ ರಾಜ್ಯ ನಗದು ರಹಿತ ಹಾಗು ಶೇ.100ರಷ್ಟು ಡಿಜಿಟಲೀಕರಣಗೊಂಡ ವ್ಯವಹಾರದ ರಾಜ್ಯವಾಗಲಿದೆ ಎಂದು ನಬಾರ್ಡ್ ಆಯೋಜಿಸಿದ್ದ ಕಾರ್ಯಕ್ರಮಯೊಂದರಲ್ಲಿ ಹೇಳಿದ್ದಾರೆ. ಮುಂದಿನ ತಿಂಗಳು ರಾಜ್ಯ ವಿಧಾನ ಸಭೆಯಲ್ಲಿ ಮಂಡನೆಯಾಗಲಿರುವ 2018-19 ರ ಬಜೆಟ್ ನಲ್ಲಿ ಶೇ.100ರಷ್ಟು ಡಿಜಿಟಲೀಕರಣದ ವಿವರ ನೀಡಲಾಗುವುದು. ಕಡಿಮೆ ನಗದು ಅಂದರೆ ಕಡಿಮೆ ಭ್ರಷ್ಟಾಚಾರ ಹಾಗೂ ರಾಜ್ಯದ ಆದಾಯದಲ್ಲಿ ಹೆಚ್ಚಳ ಎಂದು ಹೇಳಿದ್ದಾರೆ.