ಓ, ದೇವರೆ ರಾಹುಲ್ ಗಾಂಧಿಯನ್ನು ಪ್ರಧಾನಿಯಾಗಿಸು!

ನವದೆಹಲಿ| Jaya| Last Updated: ಶುಕ್ರವಾರ, 16 ಮೇ 2014 (15:00 IST)
ಲೋಕಸಭಾ ಚುನಾವಣೆ-2014ರ ಮತಗಣನೆ ಪ್ರಾರಂಭವಾಗುತ್ತಿದ್ದಂತೆ, ಕಾಂಗ್ರೆಸ್ ಬೆಂಬಲಿಗರ ಗುಂಪೊಂದು ಸ್ವರ್ಗಕ್ಕೆ ಪ್ರಾರ್ಥನೆಯನ್ನು ಕಳುಹಿಸುತ್ತಿದೆ. ಕಾಂಗ್ರೆಸ್ ಕಚೇರಿಯ ಹೊರಗಡೆ' ಓ ದೇವರೆ, ರಾಹುಲ್ ಗಾಂಧಿಯನ್ನು ಪ್ರಧಾನಿಯಾಗಿಸು, ಸೋನಿಯಾ ಗಾಂಧಿ ಪಕ್ಷಕ್ಕೆ ಗೆಲುವನ್ನು ತಂದು ಕೊಡು' ಎಂದು ಬರೆದಿರುವ ಪೋಸ್ಟರ್‌ಗಳನ್ನು ಅಂಟಿಸಲಾಗಿದೆ ಎಂದು ವರದಿಯಾಗಿದೆ.
 
ಕಾಂಗ್ರೆಸ್ ಕಚೇರಿಯ ಹೊರಗಡೆ ಪಕ್ಷದ ಗೆಲುವಿಗೆ ಏನಾದರೂ ಪವಾಡವಾಗಲಿ ಎಂಬ ಆಶಯದೊಂದಿಗೆ ಕಾರ್ಯಕರ್ತರು ಹವನವನ್ನು ಹಮ್ಮಿಕೊಂಡಿದ್ದಾರೆ.   
 
ಕಾಂಗ್ರೆಸ್ ಪ್ರಧಾನ ಕಚೇರಿಯ ಎದುರುಗಡೆ, ಲಡ್ಡುವಿನ ಘಮಘಮವಿಲ್ಲ,ಸಂಭ್ರಮಾಚರಣೆಯ ಕುರುಹುಗಳಿಲ್ಲ.ಕೇವಲ ರಾಜೀನಾಮೆಯ ಗಾಳಿ ಇದೆ.
 
ಪೋಸ್ಟರ್‌ಗಳಿಂದ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರ ಭಾವಚಿತ್ರಗಳು ಕಾಣೆಯಾಗಿವೆ. 
 
ತಮ್ಮ ಪ್ರಚಾರ ನಿರುಪಯುಕ್ತವಾಯಿತು. ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಕೈಯಲ್ಲಿ ನಾವು ಸೋಲನ್ನು ಕಾಣುತ್ತಿದ್ದೇವೆ ಎಂದು ಕಾಂಗ್ರೆಸ್ ನಾಯಕ  ಅಜಯ್ ಮಾಕನ್
ಒಪ್ಪಿಕೊಂಡಿದ್ದಾರೆ. 

LIVE Karnataka Lok Sabha 2014 Election Results
 
LIVE Lok Sabha 2014 Election Resultsಇದರಲ್ಲಿ ಇನ್ನಷ್ಟು ಓದಿ :