ಕಾನ್ಪುರ: ಅಪ್ರಾಪ್ತೆಯ ಮೇಲೆ ಅತ್ಯಾಚಾರವೆಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಯಂ ಘೋಷಿತ ದೇವ ಮಾನವ ಮಹಾಮಂಡಲೇಶ್ವರ್ ಪ್ರಖರ್ ಜೀ ಎಂಬಾತನನ್ನು ಬಂಧಿಸಲಾಗಿದೆ.ಬೆಂಗಳೂರು ಮೂಲದ ಅಪ್ರಾಪ್ತೆ ಮೇಲೆ 2020 ರಲ್ಲಿ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲು ತನ್ನ ಪೋಷಕರೊಂದಿಗೆ ಉತ್ತರ ಪ್ರದೇಶಕ್ಕೆ ಬಂದಿದ್ದಳು. ಈ ವೇಳೆ ಅಲ್ಲಿಗೆ ಬಂದಿದ್ದ ಆರೋಪಿ ಪೂಜೆ ನೆಪದಲ್ಲಿ ಆಕೆ ಮೇಲೆ ಅತ್ಯಾಚಾರವೆಸಗಿದ್ದ.ಬಳಿಕ ತನ್ನ ಆಶ್ರಮಕ್ಕೆ ಬಾಲಕಿಯನ್ನು ಕರೆದೊಯ್ದಿದ್ದ. ಈ ವಿಚಾರವನ್ನು ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದ. ತಮ್ಮ ಪುತ್ರಿಯನ್ನು