ಡಿಜಿಟಲ್ ಡೆಸ್ಕ್ : ಕೇಂದ್ರ ಸರ್ಕಾರ ಅಸಂಘಟಿತ ಕಾರ್ಮಿಕರಿಗಾಗಿ ಮತ್ತೊಂದು ಉಪಕ್ರಮವನ್ನ ಕೈಗೊಳ್ಳಲಿದೆ. ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ದೇಶಾದ್ಯಂತ 437 ಕೋಟಿ ಅಸಂಘಟಿತ ಕಾರ್ಮಿಕರಿಗಾಗಿ ಆಗಸ್ಟ್ 26 ರಂದು ಇ-ಶ್ರಮ ಪೋರ್ಟಲ್ ಅನ್ನು ಆರಂಭಿಸಲಿದೆ. ಸರ್ಕಾರದ ಈ ಉಪಕ್ರಮದಿಂದ, ಎಲ್ಲಾ ಸಾಮಾಜಿಕ ಭದ್ರತಾ ಯೋಜನೆಗಳ ಪ್ರಯೋಜನಗಳು ದೇಶದ ಎಲ್ಲಾ ಅಸಂಘಟಿತ ಕಾರ್ಮಿಕರನ್ನು ತಲುಪುತ್ತದೆ. ದೇಶಾದ್ಯಂತ ವಿವಿಧ ವಲಯಗಳಲ್ಲಿ ಕೆಲಸ ಮಾಡುವ ಅಸಂಘಟಿತ ಕಾರ್ಮಿಕರು, ಗುರುತಿನ ಚೀಟಿ ಮತ್ತು ಆಧಾರ್