ಗ್ರಾಹಕರಿಗೆ ಗುಡ್ನ್ಯೂಸ್ ಕೊಟ್ಟ ಐಒಸಿ!

ನವದೆಹಲಿ| Ramya kosira| Last Modified ಮಂಗಳವಾರ, 10 ಆಗಸ್ಟ್ 2021 (13:35 IST)
ನವದೆಹಲಿ(ಆ.10): ನಿಮಗೆ ಅಡುಗೆ ಅನಿಲ (ಎಲ್ಪಿಜಿ)ದ ಹೊಸ ಕನೆಕ್ಷನ್ಗಾಗಿ ಗ್ರಾಹಕರು ಡೀಲರ್ ಕಚೇರಿಗಳಿಗೆ ಅಲೆಯುವ ಅಗತ್ಯವೇ ಇಲ್ಲ. ಬದಲಾಗಿ 845-4955-555 ಸಂಖ್ಯೆಗೆ ಒಂದು ಮಿಸ್ಡ್ ಕಾಲ್ ಕೊಟ್ಟರೆ ಸಾಕು. ಭಾರತೀಯ ತೈಲ ಕಾರ್ಪೊರೇಷನ್ನ ಸಿಬ್ಬಂದಿ ನಿಮ್ಮ ಮನೆ ಬಾಗಿಲಿಗೇ ಬಂದು ಹೊಸ ಕನೆಕ್ಷನ್ ನೀಡುತ್ತಾರೆ.
ಭಾರತೀಯ ತೈಲ ಕಾರ್ಪೊರೇಷನ್ನ ಅಧ್ಯಕ್ಷ ಎಸ್.ಎಂ ವೈದ್ಯ ಅವರು ಸೋಮವಾರ ದೇಶದ ಯಾವುದೇ ಮೂಲೆಯಲ್ಲಿರುವ ಗ್ರಾಹಕರು ಮಿಸ್ಡ್ ಕಾಲ್ ನೀಡಿದರೆ ಎಲ್ಪಿಜಿಯ ಹೊಸ ಕನೆಕ್ಷನ್ ನೀಡುವ ಯೋಜನೆಗೆ ಚಾಲನೆ ನೀಡಿದರು. ಈ ಯೋಜನೆಯಿಂದ ಹಿರಿಯ ನಾಗರಿಕರು ಮತ್ತು ಗ್ರಾಮೀಣ ಪ್ರದೇಶಗಳ ಜನರಿಗೆ ತಾವು ಇರುವಲ್ಲಿಗೇ ಅಡುಗೆ ಅನಿಲ ಪಡೆಯಲು ನೆರವಾಗಲಿದೆ ಎಂದು ಪ್ರತಿಪಾದಿಸಿದರು.> ಅಲ್ಲದೆ ಹಾಲಿ ಗ್ರಾಹಕರು ಎಲ್ಪಿಜಿ ಸಿಲಿಂಡರ್ ರೀಫಿಲ್ ಮಾಡಿಸಿಕೊಳ್ಳಲು ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ಮಿಸ್ಡ್ ಕಾಲ್ ಕೊಟ್ಟರೂ ಸಾಕು. ಎಲ್ಪಿಜಿ ರೀಫಿಲ್ಗೆ ಸಿಬ್ಬಂದಿ ಮನೆಗೇ ಬರಲಿದ್ದಾರೆ. ಮಿಸ್ಡ್ ಕಾಲ್ ನೀಡಿದ ಗ್ರಾಹಕರಿಗೆ ಎಲ್ಪಿಜಿ ಸಿಲಿಂಡರ್ನ ಹೊಸ ಕನೆಕ್ಷನ್ ಮತ್ತು ಹಾಲಿ ಗ್ರಾಹಕರಿಗೆ ಸಿಲಿಂಡರ್ ಪೂರೈಸುವ ಈ ಯೋಜನೆ ಜಾರಿ ಮಾಡಿದ ದೇಶದ ಮೊದಲ ಸಂಸ್ಥೆಯಾಗಿ ಐಒಸಿ ಹೊರಹೊಮ್ಮಿದೆ.> ಆಸಕ್ತ ಗ್ರಾಹಕರು 14.2 ಕೇಜಿಯ ಎಲ್ಪಿಜಿ ಸಿಲಿಂಡರ್ ಪಡೆಯುವ ಬದಲಾಗಿ ಬ್ಯಾಕಪ್ ಆಗಿ 5 ಕೇಜಿ ಸಿಲಿಂಡರ್ ಪಡೆಯುವ ಅವಕಾಶವನ್ನು ಸಹ ಕಲ್ಪಿಸಲಾಗಿದೆ  ಇದರಲ್ಲಿ ಇನ್ನಷ್ಟು ಓದಿ :