ನವದೆಹಲಿ : ನವದೆಹಲಿ : ಇಂದು ದೇಶಾದ್ಯಂತ 75 ನೇ ಗಣರಾಜ್ಯೋತ್ಸವವನ್ನು ಸಂಭ್ರಮಕ್ಕೆ ಗೂಗಲ್ ಸಂಸ್ಥೆಯು ವಿಶೇಷ ಡೂಡಲ್ ರಚಿಸುವ ಮೂಲಕ ಭಾರತಕ್ಕೆ ಗೌರವ ಸಲ್ಲಿಸಿದೆ.ಗಣರಾಜ್ಯೋತ್ಸವದ ಆಕರ್ಷಕ ಪಥಸಂಚಲನವು ಕಾಲದಿಂದ ಕಾಲಕ್ಕೆ ಹೊಂದಿರುವ ಬದಲಾವಣೆಯನ್ನು ಈ ಡೂಡಲ್ ಸಾಂಕೇತಿಕವಾಗಿ ತಿಳಿಸಿದೆ.ಆರಂಭದಲ್ಲಿ ಜನರು ಕಪ್ಪು ಬಿಳುಪು ಟಿವಿ ಮುಖಾಂತರ ಪಥಸಂಚಲನ ವೀಕ್ಷಿಸುತ್ತಿದ್ದರು. ಬಳಿಕ ಜನರು ಬಣ್ಣದ ಟಿವಿ ಮೂಲಕ ವೀಕ್ಷಿಸುತ್ತಿದ್ದರು. ಈಗ ಅಂಗೈನಲ್ಲಿರುವ ಮೊಬೈಲ್ ಮೂಲಕವೇ ಗಣರಾಜ್ಯೋತ್ಸವ ಪಥ ಸಂಚಲನ ವೀಕ್ಷಿಸಬಹುದಾಗಿದೆ.