ಕೋಟ್ಯಂತರ ರೂಪಾಯಿ ಸಾಲ ಮಾಡಿ ಲಂಡನ್ನಿನಲ್ಲಿ ತಲೆಮರೆಸಿಕೊಂಡಿರುವ ಮದ್ಯ ದೊರೆ ವಿಜಯ್ ಮಲ್ಯ ಹಸ್ತಾಂತರಕ್ಕೆ ಕೋರಿ ಭಾರತ ಸರ್ಕಾರ, ಬ್ರಿಟನ್ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಭಾರತದ ವಿದೇಶಾಂಗ ಇಲಾಖೆ ಸಿಬಿಐ ಮೂಲಕ ನವದೆಹಲಿಯಲ್ಲಿರುವ ಬ್ರಿಟನ್ ಹೈಕಮೀಷನರ್`ಗೆ ಮನವಿ ಪತ್ರವನ್ನ ಹಸ್ತಾಂತರಿಸಿದೆ. ವಿಚಾರಣೆಗಾಗಿ ವಿಜಯ್ ಮಲ್ಯರನ್ನ ಭಾರತಕ್ಕೆ ಹಸ್ತಾಂತರಿಸುವಂತೆ ಕೋರಲಾಗಿದೆ ಎಂದು ವಿದೇಶಾಂಗ ಇಲಾಖೆಯ ವಕ್ತಾರ ವಿಕಾಸ್ ಸ್ವರೂಪ್ ತಿಳಿಸಿದ್ದಾರೆ.ಕಿಂಗ್ ಫಿಶರ್ ಸಂಸ್ಥೆಗಾಗಿ 9000 ಕೋಟಿಯಷ್ಟು ಸಾಲ ಮಾಡಿದ್ದ ವಿಜಯ್ ಮಲ್ಯ,