ಕೊರೊನಾದಿಂದ ಮುಂದಾಗುವ ನಷ್ಟ ತಿಳಿದೇ ಸರ್ಕಾರ ಲಾಕ್ ಡೌನ್ ಮಾಡಿದೆ- ಪ್ರಹ್ಲಾದ್ ಜೋಶಿ

ನವದೆಹಲಿ| pavithra| Last Modified ಶುಕ್ರವಾರ, 10 ಏಪ್ರಿಲ್ 2020 (09:26 IST)
ನವದೆಹಲಿ : ಕೊರೊನಾದಿಂದ ಮುಂದಾಗುವ ನಷ್ಟ ತಿಳಿದೇ ಲಾಕ್ ಡೌನ್ ಮಾಡಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಭಾರತದಲ್ಲಿ ಇನ್ನು ಪರಿಸ್ಥಿತಿ ಕೈಮೀರಿಲ್ಲ. ಸರ್ಕಾರ ಇದನ್ನು ನಿಭಾಯಿಸುವ ಪ್ರಯತ್ನ ಮಾಡುತ್ತಿದೆ. ಲಾಕ್ ಡೌನ್ ಮೂಲಕ ಮುಂದಾಗಬಹುದಾದ ದೊಡ್ಡ ಅನಾಹುತವನ್ನು ತಡೆಯುವ ಪ್ರಯತ್ನದಲ್ಲಿದೆ. ಆದರೆ ಇದಕ್ಕೆ ಜನರ ಸಹಕಾರ ಅಗತ್ಯ ಎಂದು ಹೇಳಿದ್ದಾರೆ.> >  

ಲಾಕ್ ಡೌನ್ ಮುಂದುವರಿಸುವ ಬಗ್ಗೆ ಪ್ರಧಾನಿ ಮೋದಿ ಚಿಂತನೆ ನಡೆಸಿದ್ದು, ವಿಪಕ್ಷ ನಾಯಕರ ಜೊತೆ ಚರ್ಚೆ ನಡೆಸಿದ್ದಾರೆ. ಎಲ್ಲಾ ಸಿಎಂಗಳ ಜೊತೆ ಚರ್ಚೆ ಮಾಡಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

 ಇದರಲ್ಲಿ ಇನ್ನಷ್ಟು ಓದಿ :