ಚೆನ್ನೈ : ಕೊರೊನಾ ಸೋಂಕಿನ ಹೊಸ ರೂಪಾಂತರಿಯಾಗಿರುವ XE ತಳಿ ರಾಜ್ಯದಲ್ಲಿ ಹೊರಹೊಮ್ಮಿದರೆ,ಅದನ್ನು ನಿಭಾಯಿಸಲು ರಾಜ್ಯ ಸರ್ಕಾರವು ಸಿದ್ಧವಾಗಿದೆ ಎಂದು ತಮಿಳುನಾಡು ಆರೋಗ್ಯ ಸಚಿವ ಮಾ ಸುಬ್ರಮಣಿಯನ್ ಭರವಸೆ ನೀಡಿದ್ದಾರೆ.ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ಎಐಎಡಿಎಂಕೆ ಶಾಸಕ ಸಿ ವಿಜಯಭಾಸ್ಕರ್ ಅವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಮಾ ಸುಬ್ರಮಣಿಯನ್ ಅವರು,ಮಹಾರಾಷ್ಟ್ರ ಮತ್ತು ಗುಜರಾತ್ನಲ್ಲಿ XE ರೂಪಾಂತರಿ ವೈರಸ್ ಪತ್ತೆಯಾದ ಬಳಿಕ ಕೇಂದ್ರ ಸರ್ಕಾರ ಕೊರೊನಾ ಹೊಸ ರೂಪಾಂತರಿಯಾಗಿರುವ ಘಿಇ ಬಗ್ಗೆ ಆತಂಕಪಡುವ