ನವದೆಹಲಿ : ದೇಶದಲ್ಲಿ ಶೇ.80ಕ್ಕೂ ಹೆಚ್ಚಿನ ಸರ್ಕಾರಿ ಶಾಲೆಗಳು ಕಸದ ರಾಶಿಗಿಂತಲೂ ಕೆಟ್ಟ ಪರಿಸ್ಥಿತಿಯಲ್ಲಿದೆ ಎಂದು ಆರೋಪಿಸಿ, ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಬುಧವಾರ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.ನರೇಂದ್ರ ಮೋದಿಯವರು ದೇಶದಲ್ಲಿ 14,500 ಶಾಲೆಗಳನ್ನು ಆಧುನೀಕರಿಸುವ ನಿರ್ಧಾರದ ಬಗ್ಗೆ ಟೀಕಿಸಿದ ಕೇಜ್ರಿವಾಲ್ ಅದನ್ನು ಸಾಗರದಲ್ಲಿನ ಹನಿ ನೀರಿಗೆ ಸಮ ಎಂಬಂತೆ ಬಣ್ಣಿಸಿದ್ದಾರೆ ಹಾಗೂ ದೇಶದ ಎಲ್ಲಾ 10 ಲಕ್ಷ ಸರ್ಕಾರಿ ಶಾಲೆಗಳನ್ನು ಮೇಲ್ದರ್ಜೆಗೆ ಏರಿಸುವಂತೆ ಯೋಜನೆ ನಡೆಸಲು