ಕ್ಯಾಮರಾ ಮ್ಯಾನ್ ಗೆ ಹೊಡೆದ ವರಮಹಾಶಯ! ವೈರಲ್ ಆಗಿದೆ ವಿಡಿಯೋ

ಬೆಂಗಳೂರು| Krishnaveni K| Last Modified ಭಾನುವಾರ, 7 ಫೆಬ್ರವರಿ 2021 (09:21 IST)
ಬೆಂಗಳೂರು: ಮದುವೆ ಮನೆಯಲ್ಲಿ ವಧೂ-ವರರ ವಿವಿಧ ಭಂಗಿಯ ಫೋಟೋ ಸೆರೆಹಿಡಿಯಲು ಕ್ಯಾಮರಾ ಮ್ಯಾನ್ ಗಳು ಏನೆಲ್ಲವೋ ಸರ್ಕಸ್ ಮಾಡುತ್ತಿರುತ್ತಾರೆ. ಆದರೆ ಈ ರೀತಿ ಮಾಡಲು ಹೋಗಿ ಕ್ಯಾಮರಾ ಮ್ಯಾನ್ ಒಬ್ಬ ವರನ ಕೈಯಿಂದಲೇ ಏಟು ತಿನ್ನುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
 > ವಧುವಿನ ತೀರಾ ಸನಿಹ ಬರುವ ಕ್ಯಾಮಾರಾ ಮ್ಯಾನ್ ಆಕೆಯ ಮುಖವನ್ನು ಕೈಯಲ್ಲಿ ಹಿಡಿದು ತನಗೆ ಬೇಕಾದಂತೆ ಪೋಸ್ ಕೊಡಲು ಹೇಳುತ್ತಾನೆ. ಇದನ್ನೆಲ್ಲಾ ನೋಡುತ್ತಿದ್ದ ವರಮಹಾಶಯನಿಗೆ ಸಹನೆಯ ಕಟ್ಟೆಯೊಡೆಯುತ್ತದೆ. ಆತ ಸೀದಾ ಕ್ಯಾಮರಾ ಮ್ಯಾನ್ ಕೆನ್ನೆಗೆ ಬಾರಿಸುತ್ತಾನೆ. ಕ್ಯಾಮರಾ ಮ್ಯಾನ್ ಗಾಬರಿಗೊಂಡು ನೋಡಿದರೆ ವಧು ಬಿದ್ದು ಬಿದ್ದೂ ನಗುತ್ತಾಳೆ. ಇಂತಹದ್ದೊಂದು ವಿಡಿಯೋ ಈಗ ವೈರಲ್ ಆಗಿದೆ.>


ಇದರಲ್ಲಿ ಇನ್ನಷ್ಟು ಓದಿ :