ಪಾಟ್ನಾ: ಮದುವೆ ಮಾಡಿಕೊಳ್ಳಲು ಆ ವರನಿಗೆ ಅದೇಕೆ ಹಿಂಜರಿಕೆಯಿತ್ತೋ. ಆದರೆ ವಧುವಿನ ಮನೆಯವರು ಪೊಲೀಸರಿಗೆ ದೂರು ನೀಡಿ ಕೊನೆಗೆ ಅವರ ಸಮ್ಮುಖದಲ್ಲೇ ತಡರಾತ್ರಿ ಮದುವೆ ಕಾರ್ಯಕ್ರಮ ನಡೆಯಿತು.ಕಳೆದ ವರ್ಷ ಈ ಜೋಡಿಯ ವಿವಾಹ ನಡೆಯಬೇಕಿತ್ತು. ಆದರೆ ಮದುವೆ ದಿನ ವರ ನಾಪತ್ತೆಯಾಗಿದ್ದ. ಬಳಿಕ ವಧುವಿನ ಮನೆಯವರು ಪೊಲೀಸರ ಮೊರೆ ಹೋಗಿದ್ದರು. ಪೊಲೀಸರ ಮಧ್ಯಸ್ಥಿಕೆಯಲ್ಲಿ ಸಂಧಾನ ನಡೆದು ಮಾರ್ಚ್ 25 ರಂದು ಮದುವೆ ನಿಗದಿಯಾಗಿತ್ತು.ಆದರೆ ಈ ಬಾರಿಯೂ ವರ ಮತ್ತೆ ನಾಪತ್ತೆಯಾಗಿದ್ದ.