2008ರಲ್ಲಿ ಗುಜರಾತ್ನ ಅಹಮದಾಬಾದ್ನಲ್ಲಿ ನಡೆದ ಸರಣಿ ಬಾಂಬ್ ಸ್ಪೋಟದ ಕಿಂಗ್ ಪಿನ್ ನಾಸೀರ್ ರಂಗ್ರೇಜ್(38)ನನ್ನು ಗಡಿ ನಾಡು ಬೆಳಗಾವಿಯಲ್ಲಿ ಬಂಧಿಸಲಾಗಿದೆ. ಗುಜರಾತ್ ಭಯೋತ್ಪಾದನಾ ನಿಗ್ರಹ ದಳ ಸ್ಥಳೀಯ ಪೊಲೀಸರೊಂದಿಗೆ ಈ ಕಾರ್ಯಾಚರಣೆಯನ್ನು ನಡೆಸಿತ್ತು. ಆರೋಪಿಯನ್ನು ನಗರದ ಬಡ್ಕರ್ಗಲ್ಲಿಯಲ್ಲಿರುವ ನಿವಾಸದಿಂದ ಎಟಿಎಸ್ ಇನ್ಸಪೆಕ್ಟರ್ ಭವೇಶ್ ಬಂಧಿಸಿದ್ದಾರೆ. ಆತ ಕಳೆದ ಮೂರು ನಾಲ್ಕು ವರ್ಷದಿಂದ ತನ್ನ ಕುಟುಂಬದೊಂದಿಗೆ ಇಲ್ಲಿ ವಾಸಿಸುತ್ತಿದ್ದ ಎಂದು ಡಿಸಿಪಿ( ಅಪರಾಧ ಮತ್ತು ಸಂಚಾರ) ಅಮರನಾಥ್ ರೆಡ್ಡಿ ತಿಳಿಸಿದ್ದಾರೆ.