ನವದೆಹಲಿ : ಗುಜರಾತ್ ತನ್ನ ಸಂಸ್ಥಾಪನಾ ದಿನವನ್ನು ಮೇ 1 ರಂದು ಗುಜರಾತ್ ಗೌರವ ದಿನ ಎಂದು ಆಚರಿಸುತ್ತದೆ. ಈ ಹಿನ್ನಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಗುಜರಾತ್ ಜನತೆಗೆ ಶುಭಾಶಯ ತಿಳಿಸಿದ್ದಾರೆ. ಸೋಮವಾರ ಟ್ವೀಟ್ ಮಾಡಿರುವ ಅವರು, ಮಹಾತ್ಮ ಗಾಂಧಿ ಮತ್ತು ಸರ್ದಾರ್ ಪಟೇಲ್ ಅವರಂತಹ ಮಹಾನ್ ನಾಯಕರ ಜನ್ಮಸ್ಥಳವಾದ ಗುಜರಾತ್ ಭಾರತದ ಪ್ರಗತಿಗೆ ವಿಶೇಷ ಕೊಡುಗೆ ನೀಡಿದೆ. ಗುಜರಾತ್ ದಿನದಂದು ಗುಜರಾತ್ ಜನತೆಗೆ ಶುಭಾಶಯಗಳು