ಇಲ್ಲಿನ ತುಲಾರೆ ಕೌಂಟಿಯ ಮನೆಯೊಂದಕ್ಕೆ ನುಗ್ಗಿದ ಇಬ್ಬರು ಬಂದೂಕುಧಾರಿಗಳು, 17 ವರ್ಷದ ತಾಯಿ ಮತ್ತು ಅವರ 6 ತಿಂಗಳ ಮಗು ಸೇರಿದಂತೆ ಮನೆಯಲ್ಲಿದ್ದ ಆರು ಜನರನ್ನು ಗುಂಡಿಕ್ಕಿ ಕೊಂದಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಗುಂಡಿನ ಸದ್ದು ಕೇಳಿದ ಸ್ಥಳೀಯರೊಬ್ಬರು ನಮಗೆ ದೂರು ನೀಡಿದ್ದರು. ಸೋಮವಾರ ಮುಂಜಾನೆ 4 ಗಂಟೆಗೆ ಅಧಿಕಾರಿಗಳು ಘಟನಾ ಸ್ಥಳಕ್ಕೆ ಆಗಮಿಸಿದಾಗ ತನ್ನ ತೋಳಿನಲ್ಲಿ ಮಗು ಎತ್ತಿಕೊಂಡಿದ್ದ ತಾಯಿಯನ್ನು ಹತ್ಯೆ ಮಾಡಿ ಮನೆಯ ಹೊರಗೆ ಶವ ಎಸೆಯಲಾಗಿತ್ತು.