ಗುರುದಾಸ್ಪುರ್ ಲೋಕಸಭೆಯ ಉಪಚುನಾವಣೆಯಲ್ಲಿ ಬಿಜೆಪಿಗೆ ಮುಖಭಂಗವಾಗಿದ್ದು ಕಾಂಗ್ರೆಸ್ ಪಕ್ಷ ಭರ್ಜರಿ ಜಯಗಳಿಸಿದೆ. ಹಿರಿಯ ನಟ ಸಂಸದ ವಿನೋದ್ ಖನ್ನಾ ಸಾವಿನಿಂದ ತೆರವಾಗಿದ್ದ ಗುರುದಾಸ್ಪುರ್ ಲೋಕಸಭೆಯ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸುನೀಲ್ ಜಾಖರ್ ಅವರು 1 ಲಕ್ಷ 92 ಸಾವಿರ ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸುನೀಲ್ ಜಾಖರ್ 4.57 ಲಕ್ಷ ಮತಗಳಿಸಿದ್ದರೆ, ಬಿಜೆಪಿ-ಅಕಾಲಿ ಮೈತ್ರಿಕೂಟ ಸ್ವರನ್ ಸಲಾರಿಯಾ ಅಭ್ಯರ್ಥಿ 2.74 ಲಕ್ಷ ಮತಗಳನ್ನು ಮಾತ್ರ