ಬೆಂಗಳೂರು : ಹಲಾಲ್ ಬಾಯ್ಕಾಟ್ಗೆ ಭರ್ಜರಿ ಪ್ರತಿಕ್ರಿಯೆ ದೊರೆತಿದ್ದು, ಈ ಹಿನ್ನೆಲೆಯಲ್ಲಿ ಹಲಾಲ್ ದಂಗಲ್ನ್ನು ಒಂದು ದಿನಗಷ್ಟೇ ಸಿಮೀತವಾಗಿಸದೇ ಇದನ್ನು ದೊಡ್ಡ ಮಟ್ಟದಲ್ಲಿ ಆರಂಭ ಮಾಡಲು ಹಿಂದೂ ಸಂಘಟನೆಗಳು ಈಗ ಸಜ್ಜಾಗಿದೆ.ಯಗಾದಿ ಮರು ದಿನವಾದ ಹೊಸತೊಡಕು ವೇಳೆ ಗ್ರಾಹಕರು ಹಿಂದೂ ಅಂಗಡಿಗಳ ಮುಂದೆ ಸಾಲು ಸಾಲು ನಿಂತಿದ್ದರು. ಜಟ್ಕಾ ಕಟ್ ಖರೀದಿಗಾಗಿಯೇ ಬೇರೆ ಜಾಗಗಳಿಂದ ಬಂದಿದ್ದರು. ಭಾನುವಾರ ಒಂದೇ ದಿನಕ್ಕೆ ಜಟ್ಕಾ ಕಟ್ ಅಂಗಡಿಗಳಲ್ಲಿ ಲಕ್ಷಾಂತರ ರೂ. ಮೌಲ್ಯದ ವ್ಯಾಪಾರವಾಗಿತ್ತು.