ಗುಜರಾತ್ನಲ್ಲಿ ಕೊಳಕು ರಾಜಕಾರಣ ಆರಂಭವಾಗಿದೆ. ನನ್ನ ವಿರುದ್ಧ ಕಳಂಕ ತರಲು ಬಿಜೆಪಿ ಷಡ್ಯಂತ್ರ್ಯ ನಡೆಸಿದೆ ಎಂದು ಪಾಟೀದಾರ್ ಸಮುದಾಯದ ಮುಖಂಡ ಹಾರ್ದಿಕ್ ಪಟೇಲ್ ಸ್ಪಷ್ಟಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಿಡಿಯಲ್ಲಿರುವುದು ನಾನಲ್ಲ. ನನ್ನ ಇಮೇಜ್ಗೆ ಕೆಟ್ಟಹೆಸರು ತರಲು ಬಿಜೆಪಿ ಇಂತಹ ಕೃತ್ಯಗಳಿಗೆ ಮುಂದಾಗಿದೆ ಎಂದು ಆರೋಪಿಸಿದ್ದಾರೆ. ಈ ರೀತಿ ಸಿಡಿ ಬಿಟ್ಟಿರುವುದು ಇದೇ ಮೊದಲಲ್ಲ. ಹಿಂದೆ ಕೂಡಾ ಇದೇ 10 ನಿಮಿಷದ ಸಿಡಿ ಸಾಮಾಜಿಕ ಜಾಲ ತಾಣಗಳಲ್ಲಿ ಹರಿಬಿಡಲಾಗಿತ್ತು.