Widgets Magazine

ಹಾರ್ದಿಕ್ ಪಟೇಲ್ ನಾಪತ್ತೆ! ಪತ್ನಿಯಿಂದ ದೂರು ದಾಖಲು

ಅಹಮ್ಮದಾಬಾದ್| Krishnaveni K| Last Modified ಶುಕ್ರವಾರ, 14 ಫೆಬ್ರವರಿ 2020 (10:01 IST)
ಅಹಮ್ಮದಾಬಾದ್: ಪಟೇಲ್ ಸಮುದಾಯದ ನಾಯಕ ಎಂದೇ ಗುರುತಿಸಿಕೊಂಡಿದ್ದ, ಹಾರ್ದಿಕ್ ಪಟೇಲ್ ನಾಪತ್ತೆಯಾಗಿದ್ದಾರೆಂದು ಅವರ ಪತ್ನಿ ಕಿಂಜಾಲ್ ಪಟೇಲ್ ಪೊಲೀಸರಿಗೆ ದೂರು ನೀಡಿದ್ದಾರೆ.

 
ಕಳೆದ 20 ದಿನಗಳಿಂದ ನನ್ನ ಪತಿ ನಾಪತ್ತೆಯಾಗಿದ್ದಾರೆ. ಇದಕ್ಕೆಲ್ಲಾ ಗುಜರಾತ್ ಆಡಳಿತವೇ ಕಾರಣ. ಅವರು ನನ್ನ ಗಂಡನನ್ನೇ ಟಾರ್ಗೆಟ್ ಮಾಡಿದ್ದಾರೆ ಎಂದು ದೂರಿನಲ್ಲಿ ಕಿಂಜಾಲ್ ಹೇಳಿದ್ದಾರೆ.
 
ನನ್ನ ಗಂಡ ಎಲ್ಲಿದ್ದಾರೆಂದು ಗೊತ್ತಿಲ್ಲ. ಅವರ ಬಗ್ಗೆ ಸುಳಿವಿಲ್ಲ ಎಂದು ಒಂದು ಕಡೆ ಕಿಂಜಾಲ್ ದೂರಿದರೆ ಮತ್ತೊಂದೆಡೆ ಇದೇ ಫೆಬ್ರವರಿ 11 ರಂದು ದೆಹಲಿ ಚುನಾವಣೆ ಗೆದ್ದ ಅರವಿಂದ್ ಕೇಜ್ರಿವಾಲ್ ರಿಗೆ ಹಾರ್ದಿಕ್ ಅಧಿಕೃತ ಟ್ವಿಟರ್ ಖಾತೆಯಿಂದ ಟ್ವೀಟ್ ಪ್ರಕಟವಾಗಿತ್ತು. ಹೀಗಾಗಿ ಹಾರ್ದಿಕ್ ನಾಪತ್ತೆ ಪ್ರಕರಣದ ಹಿಂದಿನ ಅಸಲಿ ಕತೆ ಬಗ್ಗೆ ಅನುಮಾನ ಶುರುವಾಗಿದೆ.
ಇದರಲ್ಲಿ ಇನ್ನಷ್ಟು ಓದಿ :