ಹರ್ಯಾಣದ ಡೇರಾ ಸಚ್ಚಾ ಸೌಧದ ಮುಖ್ಯಸ್ಥ ರಾಮ್ ರಹೀಮ್ ಸಿಂಗ್`ಗೆ ಶಿಕ್ಷೆಯಾದ ಬಳಿಕ ಡೇರಾ ಆಶ್ರಮವನ್ನ ಸೇನೆ ವಶಕ್ಕೆ ಪಡೆದುಕೊಂಡಿದೆ. 4 ಸೇನಾ ತುಕಡಿಗಳು ಡೇರಾ ಸಚ್ಚಾ ಸೌಧವನ್ನ ಸುತ್ತುವರೆದಿದ್ದು, ಆಶ್ರಮದಲ್ಲಿದ್ದ ಭಕ್ತರು, ರಾಮ್ ರಹೀಮ್ ಅನುಯಾಯಿಗಳು, ಆಡಳಿತ ಸಿಬ್ಬಂದಿಯನ್ನ ಹೊರಗೆ ಕಳುಹಿಸಲಾಗುತ್ತಿದೆ. ನಿನ್ನೆ ರಾಮ್ ರಹೀಮ್`ಗೆ ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಯಾದ ಬಳಿಕ ಹರ್ಯಾಣದಲ್ಲಿ ಡೇರಾ ಗೂಂಡಾಗಳು ಹಿಂಸಾಚಾರ ನಡೆಸಿದ್ದರು. ಗೂಂಡಾಗಳಿಗೆ ಹಿಂಸಾಚಾರ ನಡೆಸಲು ಡೇರಾ ಆಶ್ರಮದಿಂದಲೇ ಸೂಚನೆ ಬರುತ್ತಿತ್ತು