Widgets Magazine

ಕ್ಲಾಸ್ ರೂಂನಲ್ಲಿ ಹೆಡ್ ಮಾಸ್ಟರ್ ಕಾಮದಾಟ!

ಪಾಟ್ನಾ| pavithra| Last Modified ಬುಧವಾರ, 25 ನವೆಂಬರ್ 2020 (06:40 IST)
ಪಾಟ್ನಾ : ಶಾಲೆಯ ಕೋಣೆಯಲ್ಲಿ ಮಹಿಳೆಯ ಜೊತೆ ಕಾಮದಾಟದಲ್ಲಿ ತೊಡಗಿದ್ದ ಶಾಲೆಯ ಮುಖ್ಯ ಶಿಕ್ಷಕನನ್ನು ಗ್ರಾಮಸ್ಥರು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ಬಿಹಾರದ ಸೇಮಾಪುರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕಮಲೇಶ್ವರಿದಾಸ್ ಇಂತಹ ನೀಚ ಕೃತ್ಯ ಎಸಗಿದ ಹೆಡ್ ಮಾಸ್ಟರ್. ಈತ ಶಾಲೆಯ ಕೋಣೆಯೊಂದರಲ್ಲಿ ಬೆಡ್ ರೂಂ ಮಾಡಿಕೊಂಡು ಅನೈತಿಕ ಸಂಬಂಧದಲ್ಲಿ ತೊಡಗಿದ್ದ. ಈತ ಮಹಿಳೆಯೊಬ್ಬಳನ್ನು ಕರೆದುಕೊಂಡು ಶಾಲೆಗೆ ಹೋಗುತ್ತಿರುವುದನ್ನು ಕಂಡ ಗ್ರಾಮಸ್ಥರು ಶಾಲೆಗೆ ಬಂದು ನೋಡಿದ್ದಾರೆ. ಆ ವೇಳೆ ಅವನ ಕಾಮದಾಟ ಬಯಲಿಗೆ ಬಂದಿದೆ.

ತಕ್ಷಣ ಗ್ರಾಮಸ್ಥರು ಪೊಲೀಸರಿಗೆ  ಮಾಹಿತಿ ನೀಡಿ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಮಹಿಳೆ ಅಲ್ಲಿದ ಪರಾರಿಯಾಗಿದ್ದಾಳೆ. ಈತನ ಪತ್ನಿ ಪಂಚಾಯಿತಿ ಅಧ್ಯಕ್ಷೆಯಾಗಿದ್ದು, ಇದು ಪತಿಯ ತಪ್ಪಲ್ಲ, ರಾಜಕೀಯ ವಿರೋಧಿಗಳ ಕುತಂತ್ರ ಎಂದು ವಾದಿಸುತ್ತಿದ್ದಾಳೆ ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :