ಡೆಹ್ರಾಡೂನ್ : ಉತ್ತರಾಖಂಡದ ಆರೋಗ್ಯ ಸಚಿವರ ಕಾರು ಅಪಘಾತಕ್ಕೀಡಾದ ಘಟನೆ ಮಂಗಳವಾರ ನಡೆದಿದೆ.ಸಚಿವ ಧಾನ್ ಸಿಂಗ್ ರಾವತ್ ಅವರು ತಮ್ಮ ಸಿಬ್ಬಂದಿಯೊಂದಿಗೆ ತಲಿಸ್ಮಾನ್ ಪಟ್ಟಣದಿಂದ ಡೆಹ್ರಾಡೂನ್ ಗೆ ಮರಳುವಾಗ ಈ ದುರ್ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಅಪಘಾತಕ್ಕೀಡಾದ ಕಾರುಗಳ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಫೋಟೋದಲ್ಲಿ ಸಚಿವರಿದ್ದ ಕಾರು ಪಲ್ಟಿಯಾಗಿದೆ. ನಿಂತಿದ್ದ ಇನ್ನೊಂದು ಕಾರಿಗೆ ಒರಗಿದಂತಿರುವುದನ್ನು ಕಾಣಬಹುದಾಗಿದೆ.ಘಟನೆಯಿಂದ ಸಚಿವರು ಭಾರೀ ಅವಘಡದಿಂದ ಪಾರಾಗಿದ್ದಾರೆ. ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು