ಕೊವಿಶೀಲ್ಡ್ ಲಸಿಕೆಗೆ ವಿದೇಶದಿಂದ ಭಾರೀ ಬೇಡಿಕೆ; ಲಸಿಕೆ ರಫ್ತಿಗೆ ಕೇಂದ್ರ ಸರ್ಕಾರದಿಂದ ನಿರ್ಬಂಧ

ನವದೆಹಲಿ| pavithra| Last Modified ಸೋಮವಾರ, 4 ಜನವರಿ 2021 (12:16 IST)
ನವದೆಹಲಿ : ಪುಣೆಯಲ್ಲಿ ಉತ್ಪಾದನೆಯಾಗ್ತಿರೋ ಕೊವಿಶೀಲ್ಡ್ ಗೆ ಜಗತ್ತಿನಾದ್ಯಂತ ಭಾರಿ ಬೇಡಿಕೆ ಹಿನ್ನಲೆಯಲ್ಲಿ ಕೊವಿಶೀಲ್ಡ್ ಲಸಿಕೆ ರಫ್ತಿಗೆ ಕೇಂದ್ರ ಸರ್ಕಾರದಿಂದ ನಿರ್ಬಂಧ ಹೇರಿದೆ ಎನ್ನಲಾಗಿದೆ.

ಪುಣೆಯ ಸೆರಂ ಇನ್ಸ್ ಟಿಟ್ಯೂಟ್ ನಲ್ಲಿ ಅತಿ ಹೆಚ್ಚು ಕೊವಿಶೀಲ್ಡ್ ಉತ್ಪಾದನೆ ಮಾಡಲಾಗುತ್ತಿದೆ. ಹಾಗಾಗಿ ವಿದೇಶಗಳಲ್ಲಿ ಕೊವಿಶೀಲ್ಡ್  100 ಕೋಟಿ ಡೋಸ್ ಗೆ ಭಾರೀ ಬೇಡಿಕೆ ಇದೆ. ಅದರಲ್ಲೂ  ಶ್ರೀಮಂತ ದೇಶಗಳಿಂದ ಭಾರೀ ಬೇಡಿಕೆ ಇದೆ. 

ಹಾಗಾಗಿ ಭಾರತದಿಂದ ಇತರ ದೇಶಗಳಿಗೆ ರಫ್ತು ಮಾಡಲು ನಿರ್ಬಂಧ ಹೇರಲಾಗಿದೆ. ಆದರೆ  ಭಾರತದಲ್ಲಿ ಕೊವಿಶೀಲ್ಡ್ ಮೊದಲ ಹಂತದ ತುರ್ತು ಬಳಕೆಯ ಬಳಿಕ ವಿದೇಶಗಳಿಗೆ ರಪ್ತು ಮಾಡಲು ಅನುಮತಿ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :