ಚೆನ್ನೈ : ತಮಿಳುನಾಡಿನಲ್ಲಿ ಭಾರೀ ಮಳೆ ಸುರಿಯುತ್ತಿರುವ ಪರಿಣಾಮ 75,000ಕ್ಕೂ ಹೆಚ್ಚು ಲೋಡೆಡ್ ಟ್ರಕ್ಗಳು ಪ್ರಮುಖ ನಗರಗಳು ಮತ್ತು ಪಟ್ಟಣಗಳಲ್ಲಿ ಸಿಲುಕಿಕೊಂಡಿವೆ ಎಂದು ವರದಿಗಳು ತಿಳಿಸಿವೆ. ತಮಿಳುನಾಡಿನಲ್ಲಿ ಎಡೆಬಿಡದಂತೆ ಮಳೆ ಸುರಿಯುತ್ತಿರುವ ಹಿನ್ನೆಲೆ ಟ್ರಕ್ಗಳು ಸಿಲುಕಿಕೊಂಡಿದ್ದು, ಈ ಟ್ರಕ್ಗಳು ದೆಹಲಿ, ಪಂಜಾಬ್, ಹಿಮಾಚಲ ಪ್ರದೇಶ ಮತ್ತು ಜಮ್ಮುಕಾಶ್ಮೀರವನ್ನು ತಲುಪಬೇಕು. ಮಳೆಯಿಂದಾಗಿ ಟ್ರಕ್ಗಳು ರಾಜ್ಯಗಳಿಗೆ ತಲುಪಲು ಸಾಧ್ಯವಾಗುತ್ತಿಲ್ಲ.ಇನ್ನು ತಮಿಳುನಾಡಿಗೆ ಬರಬೇಕಿದ್ದ 25,000ಕ್ಕೂ ಹೆಚ್ಚು ಟ್ರಕ್ಗಳು ಉತ್ತರ ರಾಜ್ಯಗಳಲ್ಲಿ ಸಿಲುಕಿಕೊಂಡಿದೆ ಎಂದು ತಮಿಳುನಾಡು