ಡೆಹ್ರಾಡೂನ್: ಭಾರೀ ಮಳೆ ಸುರಿಯುತ್ತಿರುವ ಕಾರಣ ಉತ್ತರಾಖಂಡದ ಸೋನ್ಪ್ರಯಾಗ ಮತ್ತು ಗೌರಿಕುಂಡ್ನಲ್ಲಿ ಕೇದಾರನಾಥ ಯಾತ್ರೆಯನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸೋನ್ಪ್ರಯಾಗ್ ಮತ್ತು ಗೌರಿಕುಂಡ್ನಲ್ಲಿ ಪ್ರತಿಕೂಲ ಹವಾಮಾನ ಇರುವ ಕಾರಣ ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿರಿಸಿಕೊಂಡು ಜಿಲ್ಲಾಡಳಿತ ಈ ನಿರ್ಧಾರ ಕೈಗೊಂಡಿದೆ. ಭಾರೀ ಮಳೆಯ ಪರಿಣಾಮ 4 ರಾಜ್ಯ ರಸ್ತೆ ಮತ್ತು 10 ಸಂಪರ್ಕ ರಸ್ತೆಗಳು ಮುಚ್ಚಿವೆ. ಅಲ್ಲದೇ ಧಾರಾಕಾರ ಮಳೆಯ ಪರಿಣಾಮ ಮಂದಾಕಿನಿ ಮತ್ತು ಅಲಕಾನಂದ ನದಿಗಳು