ನವದೆಹಲಿ : ಮುಂದಿನ ವಿಚಾರಣೆವರೆಗೂ ಹೋಟೆಲ್ ಮತ್ತು ರೆಸ್ಟೋರೆಂಟ್ಗಳು ಸೇವಾ ಶುಲ್ಕ ವಿಧಿಸುವುದನ್ನು ಮುಂದುವರಿಸಬಹುದು ಎಂದು ದೆಹಲಿ ಹೈಕೋರ್ಟ್ ಹೇಳಿದೆ. ಗ್ರಾಹಕ ಸಂರಕ್ಷಣಾ ಪ್ರಾಧಿಕಾರ (ಸಿಸಿಪಿಎ) ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ರೆಸ್ಟೋರೆಂಟ್ ಸಂಸ್ಥೆಗಳಿಗೆ ನೋಟಿಸ್ ನೀಡಿ ಈ ಮಹತ್ವದ ಸೂಚನೆ ನೀಡಿದೆ.ಕಳೆದ ಜೂನ್ನಲ್ಲಿ ಗ್ರಾಹಕ ವ್ಯವಹಾರಗಳ ಸಚಿವಾಲಯವು, ಬಿಲ್ಗಳಲ್ಲಿ ಸೇವಾ ಶುಲ್ಕವನ್ನು ಕಡ್ಡಾಯವಾಗಿ ವಿಧಿಸುವುದನ್ನು ನಿಲ್ಲಿಸುವಂತೆ ಹೋಟೆಲ್, ರೆಸ್ಟೋರೆಂಟ್ ಸಂಘಗಳಿಗೆ ಸೂಚಿಸಿತ್ತು. ಇದು ಕಾನೂನುಬಾಹಿರ ಚಟುವಟಿಕೆ