ಮುಂಬೈ : ಎಕೆ 47 ರೈಫಲ್ ಹಾಗೂ ಮದ್ದುಗುಂಡುಗಳನ್ನು ಒಳಗೊಂಡ ಅನೇಕ ಶಸ್ತ್ರಾಸ್ತ್ರಗಳಿದ್ದ ದೋಣಿಯೊಂದು ಮಹಾರಾಷ್ಟ್ರದ ರಾಯಗಢದ ಸಮುದ್ರದಲ್ಲಿ ಪತ್ತೆ ಆಗಿದೆ. ರಾಯಗಢದ ಹರಿಹರೇಶ್ವರ ಬೀಚ್ ಬಳಿ ಬೋಟ್ ಪತ್ತೆ ಆಗಿದ್ದು, ಅದರಲ್ಲಿ ಅನೇಕ ಮದ್ದುಗುಂಡುಗಳು ಹಾಗೂ 3 ಎಕೆ 47 ರೈಫೆಲ್ಗಳು ಪತ್ತೆಯಾಗಿವೆ. ಈ ಎಲ್ಲಾ ಶಸ್ತ್ರಾಸ್ತ್ರಗಳನ್ನು ಸ್ಥಳೀಯ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಆ ಪ್ರದೇಶವನ್ನು ಹೈಅಲರ್ಟ್ ಎಂದು ಘೋಷಿಸಿದ್ದಾರೆ.ಈ ಬಗ್ಗೆ ಸ್ಥಳೀಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.