Widgets Magazine

ಪೆಟ್ರೋಲ್, ಡೀಸೆಲ್ ಬೆಲೆ ಮತ್ತೆ ದಾಖಲೆ ಏರಿಕೆ

ನವದೆಹಲಿ| Krishnaveni K| Last Modified ಭಾನುವಾರ, 16 ಸೆಪ್ಟಂಬರ್ 2018 (10:49 IST)
ನವದೆಹಲಿ: ದೇಶದಲ್ಲಿ ತೈಲ ಬೆಲೆ ದಿನೇ ದಿನೇ ಏರಿಕೆಯಾಗುತ್ತಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ದಾಖಲೆಯ ಏರಿಕೆ ಕಂಡಿದೆ.


ರಾಜಧಾನಿ ನವದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀ. ಗೆ 81.91 ರೂ. ಮತ್ತು ಡೀಸೆಲ್ ಬೆಲೆ 73.72 ರೂ. ತಲುಪಿದೆ. ಮುಂಬೈಯಲ್ಲಿ ದಾಖಲೆಯ 89.29 ರೂ. ಮತ್ತು ಡೀಸೆಲ್ ಗೆ 78.26 ರೂ. ವರೆಗೆ ತಲುಪಿದೆ.


ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಈ ಮಟ್ಟಿಗೆ ಏರಿಕೆ ಕಂಡಿರುವುದು ಇದೇ ಮೊದಲಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಸಾಗಣೆ ವೆಚ್ಚ ಹೆಚ್ಚಳವಾಗಿರುವುದು ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿದಿರುವುದು ಈ ಬೆಲೆ ಏರಿಕೆಗೆ ಕಾರಣವಾಗುತ್ತಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.
ಇದರಲ್ಲಿ ಇನ್ನಷ್ಟು ಓದಿ :