ಪಾಕಿಸ್ತಾನದ ಕರಾಚಿ ಮುನ್ಸಿಪಲ್ ಕಾರ್ಪೊರೇಶನ್ನ ನಿವೃತ್ತ ನಿರ್ದೇಶಕ ಮತ್ತು ನೇತ್ರತಜ್ಞ ಡಾ. ಬೀರ್ಬಲ್ ಗೆನಾನಿ ಅವರನ್ನು ಲಿಯಾರಿ ಎಕ್ಸ್ಪ್ರೆಸ್ವೇ ಬಳಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ದಾಳಿಯಲ್ಲಿ ಅವರ ಸಹಾಯಕ ಡಾ. ಕುರಾತ್-ಉಲ್-ಐನ್ ಗಾಯಗೊಂಡಿದ್ದಾರೆ. ಇವರಿಬ್ಬರು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ದೃಶ್ಯ CCTVಯಲ್ಲಿ ದಾಖಲಾಗಿದೆ. CCTV ದೃಶ್ಯವನ್ನಾಧರಿಸಿ ಇದು ಉದ್ದೇಶಪೂರ್ವಕ ಹತ್ಯೆ ಎಂದು ಶಂಕಿಸಲಾಗಿದೆ. ಈ ತಿಂಗಳಲ್ಲಿ ಪಾಕಿಸ್ತಾನದಲ್ಲಿ ಹಿಂದೂ ವೈದ್ಯರನ್ನು ಉದ್ದೇಶಪೂರ್ವಕವಾಗಿ ಕೊಲೆ ಮಾಡಿರುವ 2ನೇ ಪ್ರಕರಣ ಇದಾಗಿದೆ. ಈ ತಿಂಗಳ