ಕೊಪ್ಪಳದಲ್ಲಿ ಸೋಮವಾರ ಸಂಜೆ ಭೀಕರ ಅಪಘಾತ ನಡೆದಿದ್ದು 12 ಜನ ದಾರುಣವಾಗಿ ಸಾವನ್ನಪ್ಪಿದ್ದಾರೆ. ಹಲಗೇರಿ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಲಾರಿ ಮತ್ತು ಟಂಟಂ ನಡುವೆ ಡಿಕ್ಕಿ ಸಂಭವಿಸಿದ್ದು ಟಂಟಂ ವಾಹನದಲ್ಲಿದ್ದ 12 ಜನರು ಸ್ಥಳದಲ್ಲಿಯೇ ಅಸುನೀಗಿದ್ದಾರೆ. ಟಂಟಂನಲ್ಲಿ ಒಟ್ಟು 16 ಜನರಿದ್ದರು. ಮೃತರನ್ನು ಅನ್ನಪೂರ್ಣಮ್ಮ, ಮಿರಾಜಾನಾಬಿ, ನಿರಂಜನಿ, ಶಿವಮೂರ್ತಿ, ವೀರಪ್ಪ, ಗಂಗಮ್ಮ , ನಾಗವೇಣಿ , ಕುಸುಮ, ಆಶಾ, ಬೀಬಿಜಾನ್, ಲಕ್ಷ್ಮಿ, ಸರೋಜಾ ಎಂದು