ನವದೆಹಲಿ: ವಿಧಿಯು ಅವನ ಜೀವನದಲ್ಲಿ ನಿರ್ಣಾಯಕ ತಿರುವು ನೀಡಿರದಿದ್ದರೆ ಹಿಂಡನ್ ವಾಯುನೆಲೆ ಮೇಲಿನ ದಾಳಿಯಲ್ಲಿ ವಿಫಲಗೊಂಡ ಜೈಷ್ ಎ ಮೊಹಮ್ಮದ್ ಭಯೋತ್ಪಾದಕ ದಾಳಿಯ ಮುಖ್ಯಶಂಕಿತ ಸಾಜಿದ್ ಡ್ಯಾನ್ಸರ್ ಆಗಿ ಜೀವನ ಸಾಗಿಸುತ್ತಿದ್ದ. ಸುಮಾರು 20 ವರ್ಷಗಳ ಹಿಂದೆ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಆಡಿಷನ್ ನೀಡಿದ್ದ ಸಾಜಿದ್ ಆಯ್ಕೆಯಾಗುವ ನಿರೀಕ್ಷೆಯಲ್ಲಿದ್ದ. ಅವನ ನೃತ್ಯದ ಭಂಗಿಗಳನ್ನು ಪಾರ್ಕ್ವೊಂದರಲ್ಲಿ ಅಭ್ಯಾಸ ಮಾಡುವಾಗ ಮೌಲಾನಾ ಸಂಧಿಸಿದ್ದ.