ನವದೆಹಲಿ: ರಾಜಕಾರಣಿ ಎನ್ ಡಿ ತಿವಾರಿ ಪುತ್ರ ರೋಹಿತ್ ಶೇಖರ್ ಕೊಲೆ ಪ್ರಕರಣವನ್ನು ಪೊಲೀಸರು ಬೇಧಿಸಿದ್ದು, ಪತ್ನಿಯೇ ಆರೋಪಿ ಎನ್ನುವುದು ಖಚಿತವಾಗಿದೆ.ತಾನೇ ಪತಿಯನ್ನು ಕೊಲೆ ಮಾಡಿರುವುದನ್ನು ಪತ್ನಿ ಅಪೂರ್ವ ಒಪ್ಪಿಕೊಂಡಿದ್ದಾಳೆ. ಕುಡಿದ ಮತ್ತಿನಲ್ಲಿದ್ದ ಪತಿ ರೋಹಿತ್ ಜತೆಗೆ ತೀವ್ರ ಕಲಹವಾದ ಬಳಿಕ ಉಸಿರುಗಟ್ಟಿಸಿ ಕೊಲೆ ಮಾಡಿದ್ದಲ್ಲದೆ, ಕೇವಲ ಒಂದೂವರೆ ಗಂಟೆಯಲ್ಲಿ ಸಾಕ್ಷ್ಯ ನಾಶ ಮಾಡಿದ್ದು ಬೆಳಕಿಗೆ ಬಂದಿದೆ.ದಂಪತಿ ನಡುವಿನ ಸಂಬಂಧ ಸರಿ ಇರಲಿಲ್ಲ. ಇದೇ ಕಾರಣಕ್ಕೆ ಬೇರೆಯಾಗಲು ನಿರ್ಧರಿಸಿದ್ದರು. ಹಾಗಿದ್ದರೂ