Widgets Magazine

ಮರುಮದುವೆಗೆ ಒಪ್ಪದ ವಿಧವೆಗೆ ಅಳಿಯಂದಿರು ಸೇರಿ ಹೀಗಾ ಮಾಡೋದು?

ರಾಜಸ್ತಾನ| pavithra| Last Modified ಗುರುವಾರ, 19 ನವೆಂಬರ್ 2020 (06:53 IST)
: ಮರುಮದುವೆಯಾಗಲು ನಿರಾಕರಿಸಿದ್ದಕ್ಕ ಅಳಿಯಂದಿರು ಸೇರಿ ವಿಧವೆಯೊಬ್ಬಳ ನಾಲಿಗೆ  ಮತ್ತು  ಮೂಗನ್ನು ಕತ್ತರಿಸಿದ ಘಟನೆ ರಾಜಸ್ತಾನದ ಜೋಧಪುರದಲ್ಲಿ ನಡೆದಿದೆ.

ಸಂತ್ರಸ್ತೆ 6 ವರ್ಷಗಳ ಹಿಂದೆ ಮದುವೆಯಾಗಿದ್ದು, ಒಂದು ವರ್ಷದ ಹಿಂದೆ ಆಕೆಯ ಪತಿ ನಿಧನರಾಗಿದ್ದಾರೆ. ಅಂದಿನಿಂದ ಆಕೆಯ ಅಳಿಯಂದಿರು  ಅವರು ಆಯ್ಕೆ ಮಾಡಿದ ವ್ಯಕ್ತಿಯೊಬ್ಬನನ್ನು ಮದುವೆಯಾಗುವಂತೆ ಒತ್ತಡ ಹೇರುತ್ತಿದ್ದರು. ಆದರೆ ಸಂತ್ರಸ್ತೆ ಮರುಮದುವೆಯಾಗಲು ಒಪ್ಪಲಿಲ್ಲ. ಇದರಿಂದ ಕೋಪಗೊಂಡ ಅಳಿಯಂದಿರು ಆಕೆಯ ನಾಲಿಗೆ  ಮತ್ತು  ಮೂಗನ್ನು ಕತ್ತರಿಸಿದ್ದಾರೆ. ಇದನ್ನು ತಡೆಯಲು ಬಂದ ವ್ಯಕ್ತಿಯೊಬ್ಬರ ಮೇಲೂ ಕೂಡ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.

ಸಂತ್ರಸ್ತೆಯನ್ನು ಜೋಧಪುರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪ್ರಮುಖ ಆರೋಪಿಯನ್ನು ಬಂಧಿಸಿದ್ದು, ಉಳಿದವರು ಪರಾರಿಯಾಗಿದ್ದಾರೆ ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :