ನವದೆಹಲಿ: ದೇಶವೇ ಬೆಚ್ಚಿಬೀಳುವಂತೆ ಮಾಡಿದ ಶೀನಾ ಬೋರಾ ಕೊಲೆ ವೃತ್ತಾಂತವನ್ನು ಆರೋಪಿ ಇಂದ್ರಾಣಿ ಮುಖರ್ಜಿ ಮಾಜಿ ಕಾರು ಚಾಲಕ ಬಿಚ್ಚಿಟ್ಟಿದ್ದಾನೆ. ಆತ ನ್ಯಾಯಾಲಯಕ್ಕೆ ಹೇಳಿದ ವಿವರಗಳು ನಿಜಕ್ಕೂ ಬೆಚ್ಚಿ ಬೀಳಿಸುವಂತಿದೆ.ಶೀನಾ ತಾಯಿ ಇಂದ್ರಾಣಿ ಮತ್ತು ಆಕೆಯ ಪತಿ ಪೀಟರ್ ಮುಖರ್ಜಿ ಮದ್ಯದ ಮತ್ತಿನಲ್ಲಿ ಔಷಧಿ ನೀಡಿ ಕಾರಿನಲ್ಲಿ ಶೀನಾಳನ್ನು ಹಾಕಿದ್ದಾರೆ. ನಂತರ ಇಂದ್ರಾಣಿ ಶೀನಾ ಮುಖದ ಮೇಲೆ ಕೂತು ತಗೋ ನೀನು ಕೇಳುತ್ತಿದ್ದ ಮೂರು ಬೆಡ್ ರೂಂ ಫ್ಲ್ಯಾಟ್ ಎಂದಿದ್ದಾಳೆ.