ಹೊಸದಿಲ್ಲಿ : ಕೃಷಿ ಕಾಯ್ದೆಗಳ ವಿರುದ್ಧ ದಿಲ್ಲಿಯ ಗಡಿಗಳಲ್ಲಿ ರೈತರ ಪ್ರತಿಭಟನೆಯ ಹಿನ್ನೆಲೆಯಲ್ಲಿ ದಿಲ್ಲಿ-ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿನ ಹೆದ್ದಾರಿಗಳನ್ನು ನಿರ್ಬಂಧಿಸಿರುವ ಬಗ್ಗೆ ಗುರುವಾರ ಆಕ್ಷೇಪವನ್ನು ವ್ಯಕ್ತಪಡಿಸಿದ ಸರ್ವೋಚ್ಚ ನ್ಯಾಯಾಲಯವು, ನ್ಯಾಯಾಂಗ ವೇದಿಕೆ,ಆಂದೋಲನ ಅಥವಾ ಸಂಸದೀಯ ಚರ್ಚೆಗಳ ಮೂಲಕ ಪರಿಹಾರವನ್ನು ಕಂಡುಕೊಳ್ಳಬಹುದು,ಆದರೆ ಹೆದ್ದಾರಿಗಳನ್ನು ಮುಚ್ಚಲು ಹೇಗೆ ಸಾಧ್ಯ? ಇದು ಶಾಶ್ವತ ಸಮಸ್ಯೆಯಾಗಬಾರದು ಎಂದು ಹೇಳಿತು. ಹೆದ್ದಾರಿಗಳಲ್ಲಿ ನಿರ್ಬಂಧವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿರುವ ನೊಯ್ಡಿ ನಿವಾಸಿ ಮೊನಿಕಾ ಅಗರವಾಲ್ ಅವರು, ನೊಯ್ಡದಿಂದ ದಿಲ್ಲಿಗೆ