ಚೆನ್ನೈ: ತಮಿಳುನಾಡು ಸಿಎಂ ಜಯಲಲಿತಾ ಸಾವನ್ನಪ್ಪಿ ವರ್ಷ ಕಳೆದರೂ ಅವರ ಸಾವಿನ ಬಗ್ಗೆ ಇರುವ ಅನುಮಾನಗಳು ಕೊನೆಯಾಗಿಲ್ಲ. ಇದೀಗ ತಮಿಳುನಾಡಿನ ಉನ್ನತ ಅಧಿಕಾರಿಯೊಬ್ಬರು ಸಾವಿನ ಬಗ್ಗೆ ಹೊಸದೊಂದು ಮಾಹಿತಿ ಕೊಟ್ಟಿದ್ದಾರೆ. ಜಯಲಲಿಯಾ ಅಪೋಲೋ ಆಸ್ಪತ್ರೆಗೆ ಬರುವಾಗಲೇ ನಿಸ್ತೇಜ ಸ್ಥಿತಿಯಲ್ಲಿ ಬಂದಿದ್ದರು, ಉಸಿರಾಟವಿರಲಿಲ್ಲ ಎಂದು ಅಪೋಲೋ ಆಸ್ಪತ್ರೆಯ ಉಪಾಧ್ಯಕ್ಷೆ ಪ್ರೀತಾ ರೆಡ್ಡಿ ಹೇಳಿದ್ದಾರೆ.ಇಲ್ಲಿಗೆ ಬಂದಾಗ ಅವರು ನಿಸ್ತೇಜ ಸ್ಥಿತಿಯಲ್ಲಿದ್ದರು. ಆದರೆ ಚಿಕಿತ್ಸೆಯ ನಂತರ ಸ್ವಲ್ಪ ಸುಧಾರಿಸಿದರು. ಹಾಗಿದ್ದರೂ ನಮಗೆ ಅವರನ್ನು